ಅಗ್ನಿಹೋತ್ರದ ಹಿನ್ನಲೆ

ಸುಮಾರು 1944ರ ಆಸುಪಾಸಿನಲ್ಲಿ, ಮೂಲತಃ ಅಕ್ಕಲಕೋಟೆಯವರಾದ ಪೂಜ್ಯ ಗಜಾನನ ಮಹಾರಾಜರು ಅಗ್ನಿಹೋತ್ರ ಹೋಮ ಮತ್ತು ಅದರ ಆಚರಣೆಯನ್ನು ವ್ಯವಸ್ಥಿತವಾಗಿ ಉತ್ಕೃಷ್ಟ ಮಟ್ಟದಲ್ಲಿ ರೂಪಿಸಲು ಭಗವಾನ್ ಪರಶುರಾಮರು ಕೊಟ್ಟಂತಹ ವಿದ್ಯೆಯನ್ನು ಅನುಸರಿಸಿ, ಅದರ ಉಪಯೋಗ ಮತ್ತು ಲಾಭಗಳನ್ನು ಎಲ್ಲಾ ಕಡೆ ಪಸರಿಸಿದರು.

ಅಗ್ನಿಹೋತ್ರ ಎಂದರೆ ಪ್ರತಿನಿತ್ಯ ಮನೆಗಳಲ್ಲಿ ಅಥವಾ ಸೂಕ್ತ ಸ್ಥಳದಲ್ಲಿ ಸೂರ್ಯೋದಯ ಅಥವಾ ಸೂರ್ಯಾಸ್ತ ಸಮಯದಲ್ಲಿ ಸೂರ್ಯದೇವನಿಗೆ ಅರ್ಪಿಸುವ ಒಂದು ಸಣ್ಣ ಹೋಮ. ಯಾರು ಇದನ್ನು ಆಚರಿಸುತ್ತಾರೋ ಅವರನ್ನು ಅಗ್ನಿಹೋತ್ರಿಗಳು ಎನ್ನುವರು.

ಪ್ರಾಚೀನ ವಿಜ್ಞಾನ ಮತ್ತು ವೇದಗಳ ಪ್ರಕಾರ ತಾಮ್ರ ಅಥವಾ ಚಿನ್ನದ ಹೋಮ ಕುಂಡವನ್ನು ಬಳಸಿ ಅಗ್ನಿಹೋತ್ರ ಮಾಡಬಹುದಾಗಿದೆ. ಏಕೆಂದರೆ ಅವು ಸೂಕ್ಷ್ಮಶಕ್ತಿಯನ್ನು ಉತ್ಪಾದಿಸಲು ಉತ್ತಮ‌ ಸಾಧಕಗಳಾಗಿವೆ.

ಅಗ್ನಿಹೋತ್ರದ ಹೊಗೆ ಮತ್ತು ಪವಿತ್ರ ಭಸ್ಮವು ನೀರು ಹಾಗೂ ಗಾಳಿಯನ್ನು ಶುದ್ದೀಕರಿಸುತ್ತವೆ. ಅಲ್ಲದೆ ವಾತಾವರದಲ್ಲಿರುವ ಜೀವಿಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಗ್ನಿಹೋತ್ರವನ್ನು ಸರಿಯಾದ ಸಮಯಕ್ಕೆ, ಸರಿಯಾದ ಪದಾರ್ಥಗಳೊಂದಿಗೆ ಮತ್ತು ಒಳ್ಳೆಯ ಆಲೋಚನೆಯೊಂದಿಗೆ ಆಚರಿಸುವುದರಿಂದ ಅಗಾಧ ಪ್ರಮಾಣದ ಧನಾತ್ಮಕ ಸೂಕ್ಷ್ಮಶಕ್ತಿ ಜಾಗೃತವಾಗಿ, ಇದು ನಮ್ಮ ಆರೋಗ್ಯಕರ ಜೀವನಕ್ಕೆ ಕಾರಣವಾಗುತ್ತದೆ. ಅಗ್ನಿಹೋತ್ರದ ಸಮಯದಲ್ಲಿ ಅಗಾಧ ಪ್ರಮಾಣದ ಧನಾತ್ಮಕ ಶಕ್ತಿಯು ಹೋಮ ಕುಂಡದ ಸುತ್ತಲೂ ಉತ್ಪತ್ತಿಯಾಗಿ ವಾತಾವರಣದಲ್ಲಿ ಹರಡಿರುವ ನಕಾರಾತ್ಮಕ ಶಕ್ತಿಯನ್ನು ಶೂನ್ಯಗೊಳಿಸುತ್ತದೆ.

ಡಾ.|| ಶ್ರೀ ಲಕ್ಷ್ಮೀ ಶ್ರೀನಿವಾಸ ಗುರೂಜಿ

"ಮುದ್ರಾ ರತ್ನ", "ಮುದ್ರಾ ಬ್ರಹ್ಮ","ಮುದ್ರಾ ಶಿರೋಮಣಿ"
ಡಾ.|| ಶ್ರೀ ಲಕ್ಷ್ಮೀ ಶ್ರೀನಿವಾಸ ಗುರೂಜಿ

ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ಸಂಸ್ಥಾಪಕರು ಮತ್ತು ಮುಖ್ಯಸ್ಥರು

ಗುರೂಜಿ ಶ್ರೀ ಲಕ್ಷ್ಮೀ ಶ್ರೀನಿವಾಸರು ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ಸಂಸ್ಥಾಪಕರು ಮತ್ತು ಮುಖ್ಯಸ್ಥರಾಗಿದ್ದಾರೆ. ಶ್ರೀ ಗುರೂಜಿಯವರು ಆಧ್ಯಾತ್ಮಿಕ ಗುರುಗಳಾಗಿದ್ದು, ಇವರು ತಮ್ಮ 13ನೇ ವಯಸ್ಸಿನಿಂದ ದತ್ತ ಸಂಪ್ರದಾಯವನ್ನು ಶ್ರೀ ಭಾಗೀರಥಿ ವಿಷ್ಣು ಮಹಾರಾಜ್ ಮತ್ತು ಶ್ರೀ ನಿರಂಜಾನಂದ ಸರಸ್ವತಿಗಳ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಅನುಸರಿಸುತ್ತ ಬಂದಿದ್ದಾರೆ. ಹಾಗೆಯೇ ಯೋಗ ಶಿಕ್ಷಣವನ್ನು ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿಗಳಿಂದ ಕಲಿತರು (ತಿರುಕ). ತಮ್ಮ ಪ್ರಾರಂಭಿಕ ದಿನಗಳಲ್ಲಿ ಶ್ರೀ ಗುರೂಜಿಯವರು ಸಮಾಜಸೇವೆಗಾಗಿ ಭಾರತ ವಿಕಾಸ ಪರಿಷತ್ ಮತ್ತು ಇತರ ಸಮಾಜಸೇವಾ ಹಾಗೂ ಆಧ್ಯಾತ್ಮಿಕ ಸಂಸ್ಥೆಗಳ ಮೂಲಕ ತಮ್ಮನ್ನು ತೊಡಗಿಸಿಕೊಂಡರು.

ಕಳೆದ 30 ವರ್ಷಗಳಿಂದ ಶ್ರೀ ಗುರೂಜಿಯವರು ವ್ಯಾಪಕವಾದ ಸಂಶೋಧನೆಯನ್ನು ನಡೆಸುತ್ತಿದ್ಧಾರೆ. ಮುದ್ರಾ, ಮಂತ್ರ, ತಂತ್ರ, ಯಂತ್ರ, ಜ್ಯೋತಿಷ್ಯ ಶಾಸ್ತ್ರ, ವಿಷ್ಣು ಸಹಸ್ರನಾಮದ ವೈಜ್ಞಾನಿಕ ವಿಶ್ಲೇಷಣೆ ಮತ್ತು ಕರ್ಮ ಸಿದ್ಧಾಂತದ ವಿವರಣೆ ಹಾಗೂ ಇನ್ನೂ ಹಲವು ಸಂಬಂಧಿತ ಕ್ಷೇತ್ರದಲ್ಲಿ ಪ್ರವಚನಗಳನ್ನು ನೀಡಿರುತ್ತಾರೆ. ಹಲವಾರು ಖಾಯಿಲೆಗಳನ್ನು ಮುದ್ರೆಗಳಿಂದ ಗುಣಪಡಿಸುವುದರ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿದಕ್ಕಾಗಿ ಗುರೂಜಿಯವರಿಗೆ ಹಲವು ಗೌರವ ಶೀರ್ಷಿಕೆಗಳಾದ "ಮುದ್ರಾ ರತ್ನ", "ಮುದ್ರಾ ಬ್ರಹ್ಮ","ಮುದ್ರಾ ಶಿರೋಮಣಿ" ಎಂಬ ಬಿರುದುಗಳನ್ನು ಪಡೆದಿದ್ದಾರೆ. ಗುರೂಜಿಯವರ ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದ ವಿಶೇಷ ಪಾಂಡಿತ್ಯಕ್ಕಾಗಿ "ಜ್ಯೋತಿಷ್ಯ ರತ್ನ", "ಜ್ಯೋತಿಷ್ಯ ಭೂಷಣ" ಎಂಬ ಬಿರುದುಗಳನ್ನು ಪಡೆದಿದ್ದಾರೆ. ಗುರೂಜಿಯವರ ಹಲವು ಮುದ್ರಾ ಕಾರ್ಯಕ್ರಮಗಳು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆಧುನಿಕ ವೈದ್ಯಕೀಯ ಚಿಕಿತ್ಸೆಯಿಂದ ಗುಣಪಡಿಸಲಾಗದ ಹಲವಾರು ರೋಗಗಳು ಶ್ರೀ ಗುರೂಜಿಯವರ ಕೃಪೆಯಿಂದ ಔಷಧಗಳ ಬಳಕೆಯಿಲ್ಲದೆ ಗುಣವಾಗುತ್ತಿವೆ.


ಶ್ರೀ ಗುರೂಜಿಯವರು ಸಮಾಜದ ಒಳಿತಿಗಾಗಿ ಈ ಕೆಳಗಿನ ಯಾಗ ಮತ್ತು ಕಾರ್ಯಾಗಾರಗಳನ್ನು ನಡೆಸಿಕೊಡುತ್ತಾರೆ.


ಕಾರ್ಯಾಗಾರಗಳು:

 • ಅಗ್ನಿಹೋತ್ರ ಕಾರ್ಯಾಗಾರ
 • ನಿತ್ಯ ಮುದ್ರಾ ಕಾರ್ಯಾಗಾರ
Read More

ಅಗ್ನಿಹೋತ್ರ ಮಾಡಲು ಬೇಕಾದ ಸಾಮಗ್ರಿಗಳು

 • ತಳದ ಆಧಾರ ಇರುವ ತಾಮ್ರದ ಅಗ್ನಿಕುಂಡ
 • ಚಿಕ್ಕ ತಾಮ್ರದ ತಟ್ಟೆ
 • ತಾಮ್ರದ ಇಕ್ಕಳ
 • ಶುದ್ಧ ಹಸುವಿನ ತುಪ್ಪ (ಉಪ್ಪು ರಹಿತವಾಗಿರಬೇಕು)
 • ಅಕ್ಕಿ (ಮುರಿಯದ ಅಕ್ಕಿ)
 • ಗೋವಿನ‌ ಬೆರಣಿ
 • ದೀಪ/ ಮೇಣದ ಬತ್ತಿ
 • ಬೆಂಕಿಪೊಟ್ಟಣ
 • ಪ್ರದೇಶವಾರು ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯವಿರುವ ಫಲಕ/ ವಿಶ್ವ ಅಗ್ನಿಹೋತ್ರ ಆ್ಯಪ್

ಅಗ್ನಿಹೋತ್ರ ಮಾಡುವ ವಿಧಾನ

 • ಸೂರ್ಯೋದಯ ಅಥವಾ ಸೂರ್ಯಾಸ್ತ ಸಮಯದ 8 ರಿಂದ 10 ನಿಮಿಷ ಮೊದಲು ಅಗ್ನಿಹೋತ್ರಕ್ಕೆ ತಯಾರಿಯನ್ನು ಪ್ರಾರಂಭಿಸಬೇಕು.
 • ನೆಲ/ ಕುರ್ಚಿಯ ಮೇಲೆ ಚಾಪೆ/ ಜಮಖಾನೆ‌ ಹಾಸಿ ಆರಾಮದಾಯಕ ಭಂಗಿಯಲ್ಲಿ‌ಕುಳಿತುಕೊಳ್ಳಬೇಕು.
 • 4 ರಿಂದ 5 ಚಿಕ್ಕ ಬೆರಣಿ‌ಗಳನ್ನು (ಹಸುವಿನ‌ ಸಗಣಿಯಿಂದ ಮಾಡಿದ್ದು) ಅಗ್ನಿಕುಂಡದಲ್ಲಿ ತ್ರಿಕೋನ ಅಥವಾ ಚೌಕಾಕಾರದ ಆಕಾರದಲ್ಲಿ ಜೋಡಿಸಬೇಕು.
 • ಮೇಣದಬತ್ತಿ/ ದೀಪವನ್ನು ಬಳಸಿ ಚಿಕ್ಕ ಬೆರಣಿಯನ್ನು‌ ಹತ್ತಿಸಿ, ಅದನ್ನು ತ್ರಿಕೋನ‌ ಅಥವಾ ಚೌಕಾಕಾರದಲ್ಲಿ ಹೊಂದಿಸಿದ ಚಿಕ್ಕ ಬೆರಣಿಗಳ ಮಧ್ಯೆ ಇಡಬೇಕು.
 • ಸೂರ್ಯೋದಯದ ಸಮಯದಲ್ಲಿ: ತುಪ್ಪದ ಜೊತೆಗೆ ಬೆರೆಸಿದ ಅಕ್ಕಿಯಲ್ಲಿ ಅರ್ಧ ಭಾಗ ಕೈಯಲ್ಲಿ ಹಿಡಿದು "ಸೂರ್ಯಾಯ ಸ್ವಾಹಾ ಸೂರ್ಯಾಯ ಇದಂ ನ‌ಮಮ" ಎಂಬ ಮಂತ್ರವನ್ನು ಜಪಿಸುತ್ತಾ ಅಗ್ನಿಗೆ ಸಮರ್ಪಿಸಬೇಕು. ಈಗ ಉಳಿದ ಅರ್ಧ ಭಾಗ ಕೈಯಲ್ಲಿ ಹಿಡಿದು "ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಂ ನಮಮ " ಎಂಬ ಮಂತ್ರವನ್ನು ಜಪಿಸುತ್ತಾ ಅಗ್ನಿಗೆ ಸಮರ್ಪಿಸಬೇಕು.
 • ಸೂರ್ಯಾಸ್ತ ಸಮಯದಲ್ಲಿ: ತುಪ್ಪದ ಜೊತೆಗೆ ಬೆರೆಸಿದ ಅಕ್ಕಿಯಲ್ಲಿ ಅರ್ಧ ಭಾಗ ಕೈಯಲ್ಲಿ ಹಿಡಿದು "ಅಗ್ನಯೇ ಸ್ವಾಹಾ ಅಗ್ನಯೇ ಇದಂ ನ‌ಮಮ" ಎಂಬ ಮಂತ್ರವನ್ನು ಜಪಿಸುತ್ತಾ ಅಗ್ನಿಗೆ ಸಮರ್ಪಿಸಬೇಕು. ಈಗ ಉಳಿದ ಅರ್ಧಭಾಗ ಅಕ್ಕಿ ಕೈಯಲ್ಲಿ ಹಿಡಿದು "ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಂ ನಮಮ " ಎಂಬ ಮಂತ್ರವನ್ನು ಜಪಿಸುತ್ತಾ ಅಗ್ನಿಗೆ ಸಮರ್ಪಿಸಬೇಕು.
 • ಕೊನೆಯಲ್ಲಿ ನಮ್ಮೆಲ್ಲಾ ಸಮಸ್ಯೆಗಳು ಪರಿಹಾರವಾಗಲು ಮತ್ತು ಮನಃಸಂಕಲ್ಪ ಪೂರ್ಣಗೊಳ್ಳಲು ಪವಿತ್ರ ಅಗ್ನಿಯ ಮುಂದೆ ಪ್ರಾರ್ಥಿಸಬೇಕು.

ಅಗ್ನಿಹೋತ್ರ ಮಂತ್ರದ‌ ಅರ್ಥ

ಬೆಳಿಗ್ಗೆಯ ಅಗ್ನಿಹೋತ್ರ ಮಂತ್ರ ಸಂಜೆಯ ಅಗ್ನಿಹೋತ್ರ ಮಂತ್ರ
"ಸೂರ್ಯಾಯ ಸ್ವಾಹಾ ಸೂರ್ಯಾಯ ಇದಂ ನ ಮಮ" "ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಂ ನ ಮಮ" "ಅಗ್ನಯೇ ಸ್ವಾಹಾ ಅಗ್ನಯೇ ಇದಂ ನ ಮಮ". "ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಂ ನ ಮಮ"
ಸೂರ್ಯಾಯ ಸೂರ್ಯ ಅಗ್ನಯೇ ಅಗ್ನಿ
ಸ್ವಾಹಾ ಅರ್ಪಣೆ ಸ್ವಾಹಾ ಅರ್ಪಣೆ
ಸೂರ್ಯಾಯ ಸೂರ್ಯ ಅಗ್ನಯೇ ಅಗ್ನಿ
ಇದಂ ಇದು ಇದಂ ಇದು
ನ ಮಮ ನನ್ನದಲ್ಲ ನ ಮಮ ನ ಮಮ
ಪ್ರಜಾ ಎಲ್ಲಾ ಜೀವಿಗಳು ಪ್ರಜಾ ಎಲ್ಲಾ ಜೀವಿಗಳು
ಪತಯೇ ದೇವರು ಪತಯೇ ದೇವರು
ಸ್ವಾಹಾ ಅರ್ಪಣೆ ಸ್ವಾಹಾ ಅರ್ಪಣೆ
ಪ್ರಜಾ ಎಲ್ಲಾ ಜೀವಿಗಳು ಪ್ರಜಾ ಎಲ್ಲಾ ಜೀವಿಗಳು
ಪತಯೇ ದೇವರು ಪತಯೇ ದೇವರು
ಇದಂ ಇದು ಇದಂ ಇದು
ನ ಮಮ ನನ್ನದಲ್ಲ ನ ಮಮ ನನ್ನದಲ್ಲ

ಅಗ್ನಿಹೋತ್ರ ಮಾಡುವಾಗ ಅನುಸರಿಸಬೇಕಾದ ನಿಯಮಗಳು:

 • ಅಗ್ನಿಹೋತ್ರವನ್ನು ಸ್ಥಳೀಯ ಕಾಲಮಾನದ ಪ್ರಕಾರ ನಿಖರವಾಗಿ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ನಡೆಸಬೇಕು. ಹೀಗೆ ಮಾಡುವುದರಿಂದ ಪರಿಸರದಲ್ಲಿ ಧನಾತ್ಮಕ ಶಕ್ತಿಯು ಸೃಷ್ಟಿಯಾಗಿ, ಅದು ನಕಾರಾತ್ಮಕ ಶಕ್ತಿಯನ್ನು ಶೂನ್ಯಗೊಳಿಸುತ್ತದೆ. ಪ್ರತಿಯಾಗಿ ರೋಗಗಳ‌ ವಿರುದ್ಧ ಹೋರಾಡುವ ಮತ್ತು ಆರೋಗ್ಯಕರ ಜೀವನವನ್ನು ನಡೆಸುವ ಪರಿಸರವನ್ನು ಸೃಷ್ಟಿಸುತ್ತದೆ.
 • ಅಗ್ನಿಕುಂಡದ ಗಾತ್ರವು ಅತಿಮುಖ್ಯವಾಗಿದ್ದು. ತೆರೆದ ಮೇಲ್ಭಾಗದಲ್ಲಿ14.50 ಸೆಂ.ಮೀ. x 14.50 ಸೆಂ.ಮೀ. ಇರಬೇಕು. ಕೆಳಭಾಗದಲ್ಲಿ 5.25 ಸೆಂ.ಮೀ. x 5.25 ಸೆಂ.ಮೀ. ಮುಚ್ಚಿರಬೇಕು ಮತ್ತು ಎತ್ತರವು 6.5 ಸೆಂ.ಮೀ. ಆಗಿರಬೇಕು. ಅಗ್ನಿಕುಂಡ ತಾಮ್ರ ಅಥವಾ ಚಿನ್ನದಿಂದ ಮಾಡಲ್ಪಟ್ಟಿರಬೇಕು. ಅಥರ್ವಣ ವೇದದ ಪ್ರಕಾರ ಇದು ನಿಖರವಾದ ಗಾತ್ರವಾಗಿದೆ. ಒಂದು ವೇಳೆ ದೊಡ್ಡ ಅಗ್ನಿಕುಂಡವನ್ನು ಬಳಸಿದ್ರೆ ಅದನ್ನು ನಿಭಾಯಿಸಲು ಮತ್ತು ಸಾಗಿಸಲು ಕಠಿಣವಾಗುತ್ತದೆ.
 • ಮೇಲೆ ತಿಳಿಸಲಾದ ಗಾತ್ರದ ಕುಂಡದಿಂದ ಅಗ್ನಿಹೋತ್ರ ಮಾಡುವುದರಿಂದ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಮಾಲಿನ್ಯಕಾರಕಗಳು ನಿಷ್ಕ್ರಿಯವಾಗುತ್ತವೆ. ಸುತ್ತಲಿನ ವಾತಾವರಣವನ್ನು 12 ಗಂಟೆಗಳ ಕಾಲ ಶುದ್ಧವಾಗಿರಿಸುತ್ತದೆ.
 • ಅಗ್ನಿಹೋತ್ರಕ್ಕೆ ಬೇಕಾದ ಬೆರಣಿಗಳನ್ನು (ಹಸುವಿನ‌ ಸಗಣಿಯಿಂದ ಮಾಡಲ್ಪಟ್ಟಿರಬೇಕು) ಅಗ್ನಿ‌ಕುಂಡದಲ್ಲಿಟ್ಟು ಹೊತ್ತಿಸಬೇಕು. ಹಸುವಿನ‌ ಬೆರಣಿಗಳಲ್ಲಿ‌ ಮಿಥನಾಲ್, ಫಿನಾಲ್, ಅಮೋನಿಯ ಮತ್ತು ಫಾರ್ಮಲಿನ್ ಇರುವುದು ಈಗಾಗಲೇ ವೈಜ್ಞಾನಿಕವಾಗಿ ಸಾಬೀತಾಗಿದೆ. ಅಗ್ನಿಹೋತ್ರವನ್ನು ಮಾಡುವಾಗ ಪೆಟ್ರೋಲ್, ಡೀಸೆಲ್, ಅನಿಲ ಅಥವಾ ಸೀಮೆಎಣ್ಣೆಗಳನ್ನು ಬಳಸಬಾರದು. ಅಗ್ನಿಹೋತ್ರಕ್ಕೆ ಹಸುವಿನ ತುಪ್ಪವನ್ನು (ಉಪ್ಪು ರಹಿತ) ಮಾತ್ರ ಬಳಸಬೇಕು‌. ಇತರ ಪ್ರಾಣಿಗಳ ತುಪ್ಪವನ್ನು ಯಾವದೇ ಕಾರಣಕ್ಕೂ ಬಳಸಬಾರದು.
 • ಅಗ್ನಿಹೋತ್ರಕ್ಕೆ ಬೇಕಾದ ಬೆರಣಿಗಳನ್ನು (ಹಸುವಿನ‌ ಸಗಣಿಯಿಂದ ಮಾಡಲ್ಪಟ್ಟಿರಬೇಕು) ಅಗ್ನಿ‌ಕುಂಡದಲ್ಲಿಟ್ಟು ಹೊತ್ತಿಸಬೇಕು. ಹಸುವಿನ‌ ಬೆರಣಿಗಳಲ್ಲಿ‌ ಮಿಥನಾಲ್, ಫಿನಾಲ್, ಅಮೋನಿಯ ಮತ್ತು ಫಾರ್ಮಲಿನ್ ಇರುವುದು ಈಗಾಗಲೇ ವೈಜ್ಞಾನಿಕವಾಗಿ ಸಾಬೀತಾಗಿದೆ. ಅಗ್ನಿಹೋತ್ರವನ್ನು ಮಾಡುವಾಗ ಪೆಟ್ರೋಲ್, ಡೀಸೆಲ್, ಅನಿಲ ಅಥವಾ ಸೀಮೆಎಣ್ಣೆಗಳನ್ನು ಬಳಸಬಾರದು. ಅಗ್ನಿಹೋತ್ರಕ್ಕೆ ಹಸುವಿನ ತುಪ್ಪವನ್ನು (ಉಪ್ಪು ರಹಿತ) ಮಾತ್ರ ಬಳಸಬೇಕು‌. ಇತರ ಪ್ರಾಣಿಗಳ ತುಪ್ಪವನ್ನು ಯಾವದೇ ಕಾರಣಕ್ಕೂ ಬಳಸಬಾರದು.
 • ಆಹುತಿಯನ್ನು ಅರ್ಪಿಸುವಾಗ ಪಠಿಸುವ ಮಂತ್ರಗಳು ಧನಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ. ಅಗ್ನಿಹೋತ್ರ ಮಂತ್ರಗಳನ್ನು ಪಠಿಸುವಾಗ "ಓಂ" ಕಾರವನ್ನು ಮಂತ್ರದ ಪೂರ್ವದಲ್ಲಿ (ಪ್ರಾರಂಭದಲ್ಲಿ) ಬಳಸಬಾರದು.

ಅಗ್ನಿಹೋತ್ರದ ಪ್ರಯೋಜನಗಳು

ಅಗ್ನಿಹೋತ್ರದ ಪ್ರಾಮುಖ್ಯತೆ:

ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ನಡೆಸಲು ಪ್ರತಿಯೊಬ್ಬರಿಗೂ ನೀರು, ಆಹಾರ ಮತ್ತು ಗಾಳಿಯ ಅವಶ್ಯಕತೆ ಇದೆ.

ನೀರಿನ ಸೇವನೆಯಿಲ್ಲದೆ ನಾವು 3 ಅಥವಾ 4 ದಿನಗಳವರೆಗೆ ಬದುಕಬಹುದು. ದೇಹದಲ್ಲಿ ನೀರಿನ‌ ಪ್ರಮಾಣ ಕಡಿಮೆಯಾದಲ್ಲಿ ನಿರ್ಜಲೀಕರಣ, ಅನಾರೋಗ್ಯ, ಅತಿಯಾದ ಉಷ್ಣ, ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಆಹಾರ ಸೇವನೆಯಿಲ್ಲದೆ ನಾವು 3 ವಾರಗಳವರೆಗೆ ಬದುಕಿರಬಹುದು. 3 ವಾರಗಳ‌ ಕಾಲ ಆಹಾರವನ್ನು ಸೇವಿಸದಿದ್ದರೆ ದೇಹವು ದುರ್ಬಲಗೊಳ್ಳುತ್ತದೆ. ಇದು ಸಾವಿಗೆ ಕಾರಣವಾಗುತ್ತದೆ.

ಪ್ರತಿಯೊಬ್ಬರು ಆರೋಗ್ಯವಾಗಿರಲು ಗಾಳಿಯು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ನಮ್ಮ ಪರಿಸರದಲ್ಲಿ ವಿಷಕಾರಿ ಅನಿಲಗಳು, ವಾಹನಗಳಿಂದ ಹೊರಸೂಸುವ ಹೊಗೆಗಳು, ಎಲೆಕ್ಟ್ರಾನಿಕ್/ ಎಲೆಕ್ಟ್ರಿಕಲ್ ಸಾಧನಗಳಿಂದ ವಿದ್ಯುತ್ಕಾಂತೀಯ ಕಿರಣಗಳು ಪರಿಸರವನ್ನು ಮಲಿನಗೊಳಿಸುತ್ತಿವೆ. ಅಗ್ನಿಹೋತ್ರವನ್ನು ಮಾಡುವುದರಿಂದ ನಮ್ಮ ವಾತಾವರಣವು ಶುದ್ಧೀಕರಣವಾಗುತ್ತದೆ ಹಾಗೂ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಥೈರಾಯ್ಡ್ ಚಿಕಿತ್ಸೆ:

 • ಬೇಕಾಗುವ ಸಾಮಗ್ರಿಗಳು: ಅಗ್ನಿಹೋತ್ರ ಭಸ್ಮ, ಗೋಮೂತ್ರ ಅರ್ಕ, ತುಪ್ಪ, ಹಾಲು.
 • ವಿಧಾನ‌: 1/4 ಚಮಚ ನಯವಾದ/ ಶೋಧಿಸಿದ ಅಗ್ನಿಹೋತ್ರ ಭಸ್ಮವನ್ನು ತೆಗೆದುಕೊಳ್ಳಿ. ಅದನ್ನು 1/2 ಚಮಚ ಗೋಮೂತ್ರ ಅರ್ಕ, ಸ್ವಲ್ಪ ತುಪ್ಪ ಮತ್ತು ಹಾಲಿನೊಂದಿಗೆ ಮಿಶ್ರಣ ಮಾಡಿ. ಪ್ರತಿದಿನ ಖಾಲಿ‌ ಹೊಟ್ಟೆಯಲ್ಲಿ ಈ ಮಿಶ್ರಣವನ್ನು ಸೇವಿಸಿ. ಶೀಘ್ರ ಪರಿಹಾರಕ್ಕಾಗಿ ಈ ಮಿಶ್ರಣದ ಪೇಸ್ಟನ್ನು ಗಂಟಲಿನ ಮೇಲೆ ಲೇಪಿಸಿಕೊಳ್ಳಿ.

ಕೆಮ್ಮಿನ ಔಷಧ:

 • ಬೇಕಾಗುವ ಸಾಮಗ್ರಿಗಳು: ನಿಂಬೆ, ಜೇನು, ಅಗ್ನಿಹೋತ್ರ ಭಸ್ಮ
 • ವಿಧಾನ‌: ಒಂದು ನಿಂಬೆಹಣ್ಣು ತೆಗೆದುಕೊಂಡು, ಹಿಂಡಿ ಅದರ ರಸವನ್ನು ತೆಗೆದುಕೊಳ್ಳಿ. ಇದಕ್ಕೆ 2 ಚಮಚ ಜೇನುತುಪ್ಪ, ಒಂದು ಕಪ್ ಕುದಿಸಿದ ನೀರು ಮತ್ತು 1/2 ಚಮಚ ಶೋಧಿಸಿದ ಅಗ್ನಿಹೋತ್ರ ಭಸ್ಮವನ್ನು ಸೇರಿಸಿ ಮಿಶ್ರಣ ಮಾಡಿ. ಇದನ್ನು ದಿನಕ್ಕೆ ಮೂರು ಬಾರಿ ಸೇವಿಸಿ. ಉತ್ತಮ ಫಲಿತಾಂಶಕ್ಕಾಗಿ ಈ ಮಿಶ್ರಣವನ್ನು ಪ್ರತಿ ಒಂದು ಗಂಟೆಗೊಮ್ಮೆ ಸೇವಿಸಿ.

ಗಾಯ ಗುಣವಾಗುವ ಚಿಕಿತ್ಸೆ:

 • ಬೇಕಾಗುವ ಸಾಮಗ್ರಿಗಳು: ಅಗ್ನಿಹೋತ್ರ ಭಸ್ಮ, ನೀರು ಮತ್ತು ಹತ್ತಿ/ ಸ್ವಚ್ಛವಾದ ಬಟ್ಟೆ
 • ವಿಧಾನ: ಒಂದು ಚಮಚ ಶೋಧಿಸಿದ ಅಗ್ನಿಹೋತ್ರ ಭಸ್ಮವನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ. ಅದರಲ್ಲಿ ಸ್ವಚ್ಛವಾದ ಬಟ್ಟೆ ಅಥವಾ ಹತ್ತಿಯನ್ನು ನೆನೆಸಿ‌ಡಿ. ಇದನ್ನು ಗಾಯದ ಮೇಲೆ ಹಚ್ಚಿ. ಗಂಟಲು ನೋವು, ತಲೆ‌ನೋವು, ಪಾದ ಸಂಬಂಧಿತ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಈ ಚಿಕಿತ್ಸೆಯನ್ನು ಬಳಸಬಹುದು.

ಪಿತ್ತಕೋಶ, ಯಕೃತ್ತು ಮತ್ತು ಬೆನ್ನು‌ನೋವಿಗೆ ಚಿಕಿತ್ಸೆ:

 • ಬೇಕಾಗುವ ಸಾಮಗ್ರಿಗಳು: ಅಗ್ನಿಹೋತ್ರ ಭಸ್ಮ, ನೀರು ಮತ್ತು ಹತ್ತಿ/ ಸ್ವಚ್ಛವಾದ ಬಟ್ಟೆ
 • ವಿಧಾನ: ಒಂದು ಚಮಚ ನಯವಾದ ಅಗ್ನಿಹೋತ್ರ ಭಸ್ಮವನ್ನು ಒಂದು ಲೀಟರ್ ಬಿಸಿ ನೀರಿನಲ್ಲಿ ಬೆರೆಸಿ. ಅದರಲ್ಲಿ ಸ್ವಚ್ಛವಾದ ಬಟ್ಟೆ ಅಥವಾ ಹತ್ತಿಯನ್ನು ನೆನೆಸಿ. ಯಕೃತ್ತು, ಪಿತ್ತಕೋಶ, ಬೆನ್ನಿನ ಸುತ್ತಲೂ ಈ ಹತ್ತಿಯಿಂದ ಒರೆಸಿ.

ನಿದ್ರಾಹೀನತೆಗೆ ಚಿಕಿತ್ಸೆ:

 • ಬೇಕಾಗುವ ಸಾಮಗ್ರಿಗಳು: ಅಗ್ನಿಹೋತ್ರ ಭಸ್ಮ, ನೀರು
 • ವಿಧಾನ: ಒಂದು ಚಮಚ ಅಗ್ನಿಹೋತ್ರದ ಭಸ್ಮವನ್ನು ಕುದಿಯುವ ನೀರಿಗೆ ಬೆರೆಸಿ. ಅದರ ಹಬೆಯನ್ನು ರೋಗಿಯು ಉಸಿರಾಡಬೇಕು.

ಚರ್ಮ ರೋಗದ ಚಿಕಿತ್ಸೆ:

 • ಬೇಕಾಗುವ ಸಾಮಗ್ರಿಗಳು: ಅಗ್ನಿಹೋತ್ರ ಭಸ್ಮ, ತುಪ್ಪ
 • ವಿಧಾನ: ನಯವಾದ ಅಗ್ನಿಹೋತ್ರ ಭಸ್ಮವನ್ನು ತುಪ್ಪದೊಂದಿಗೆ ಮಿಶ್ರಣ ಮಾಡಿ ಚರ್ಮದ ಮೇಲೆ ಲೇಪಿಸಿ. ಇದರಿಂದ ಎಲ್ಲಾ ರೀತಿಯ ಚರ್ಮದ ಸಮಸ್ಯೆಗಳು, ಒಣಚರ್ಮ ಇತ್ಯಾದಿ ಸಮಸ್ಯೆಗಳು ದೂರವಾಗುತ್ತವೆ.

ಆಧ್ಯಾತ್ಮಿಕ ಸ್ನಾನ:

 • ಬೇಕಾಗುವ ಸಾಮಗ್ರಿಗಳು: ಅಗ್ನಿಹೋತ್ರ ಭಸ್ಮ, ನೀರು
 • ವಿಧಾನ: ಒಂದು ಚಿಟಿಕೆ ಅಗ್ನಿಹೋತ್ರ ಭಸ್ಮವನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಎಲ್ಲಾ ರೀತಿಯ ಋಣಾತ್ಮಕ ಶಕ್ತಿಗಳಿಂದ ವಿಮುಕ್ತಿ ಹೊಂದಬಹುದು.

ದೇಹ ಮತ್ತು ಮೂಳೆ ಬಲ‌ಪಡಿಸಲು ಚಿಕಿತ್ಸೆ:

 • ಬೇಕಾಗುವ ಸಾಮಗ್ರಿಗಳು: ಅಗ್ನಿಹೋತ್ರ ಭಸ್ಮ, ಬಾದಾಮಿ/ ಆಲಿವ್ ಎಣ್ಣೆ.
 • ವಿಧಾನ: ಒಂದು ಚಮಚ ಅಗ್ನಿಹೋತ್ರದ ನಯವಾದ/ ಶೋಧಿಸಿದ ಭಸ್ಮವನ್ನು ಬಾದಾಮಿ ಅಥವಾ ಆಲಿವ್ ಎಣ್ಣೆಯೊಂದಿಗೆ ಮಿಶ್ರಣ ಮಾಡಿ, ದೇಹ/ ಮೂಳೆಗೆ ಹಚ್ಚಿಬೇಕು. ಇದರಿಂದ ದೇಹದ ಬಲ‌ ಹೆಚ್ಚಾಗುತ್ತದೆ.

ಕೂದಲು ಉದುರುವಿಕೆ ಚಿಕಿತ್ಸೆ:

 • ಬೇಕಾಗುವ ಸಾಮಗ್ರಿಗಳು: ಅಗ್ನಿಹೋತ್ರ ಭಸ್ಮ, ಕೊಬ್ಬರಿ ಎಣ್ಣೆ/ ಬಾದಾಮಿ ಎಣ್ಣೆ.
 • ವಿಧಾನ: ಒಂದು ಚಮಚ ಅಗ್ನಿಹೋತ್ರದ ಭಸ್ಮವನ್ಮು ಕೊಬ್ಬರಿ‌ ಎಣ್ಣೆ ಅಥವಾ ಬಾದಾಮಿ‌ ಎಣ್ಣೆಯೊಂದಿಗೆ ಮಿಶ್ರಣ ಮಾಡಿ, ಬಿಸಿ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು. ಬೋಳಾದ ತಲೆಗೆ ಈ ಮಿಶ್ರಣವನ್ನು ಬಳಸಿರಿ.

ಒತ್ತಡ ಮತ್ತು ತಲೆನೋವಿಗೆ ಚಿಕಿತ್ಸೆ:

ಅಗ್ನಿಹೋತ್ರವನ್ನು ಮಾಡುವುದರಿಂದ ಮತ್ತು ಕೊನೆಯಲ್ಲಿ ಉತ್ಪತ್ತಿಯಾಗುವ ಅಗ್ನಿಹೋತ್ರದ ಹೊಗೆಯನ್ನು ಉಸಿರಾಡುವುದರಂದ ಒತ್ತಡ ಮತ್ತು ತಲೆನೋವಿನ ಸಮಸ್ಯೆಗಳು‌ ನಿವಾರಣೆಯಾಗುತ್ತವೆ.